ಮನೆಲ್ಲೇ ರೆಸ್ಟೋರೆಂಟ್ ಸ್ಟೈಲ್ ತಂದುರಿ ಚಿಕನ್ – ಜ್ಯೂಸಿ & ಸ್ಮೋಕಿ ಸೀಕ್ರೆಟ್ ರೆಸಿಪಿ!

ತಂದುರಿ ಚಿಕನ್ ಅನ್ನೋದು ಪ್ರತಿ ಚಿಕನ್ ಲವರ್‌ಗಳ ಹೃದಯದ ಧಡಕ್! ಹೊರಗೆ ಸಿಕ್ಕುವ ತಂದುರಿ ಚಿಕನ್ ರುಚಿ ಎಲ್ಲರಿಗೂ ಇಷ್ಟ. ಆದರೆ ಅದೇ ರೆಸ್ಟೋರೆಂಟ್ ಸ್ಟೈಲ್ ರುಚಿಯನ್ನು ಮನೆಲ್ಲೇ ಮಾಡಬಹುದಾ? ಹೌದು! ಸರಿಯಾದ ಮೆರಿನೇಷನ್, ಹೋಮ್‌ಮೇಡ್ ತಂದುರಿ ಮಸಾಲೆ ಮತ್ತು ಸ್ಮೋಕಿ ತಂತ್ರ ಗೊತ್ತಿದ್ದರೆ ನೀವು ಕೂಡ ಪರ್ಫೆಕ್ಟ್ ಜ್ಯೂಸಿ ತಂದುರಿ ಚಿಕನ್ ತಯಾರಿಸಬಹುದು.

ಈ ರೆಸಿಪಿಯಲ್ಲಿ ಎರಡು ಮೆರಿನೇಷನ್ ಸ್ಟೆಪ್ ಇದೆ. ಅದೇ ಇದರ ಸೀಕ್ರೆಟ್!


 ಬೇಕಾಗುವ ಪದಾರ್ಥಗಳು

 ಚಿಕನ್:

  • 1 ಕೆಜಿ ಚಿಕನ್ (ಲೆಗ್ & ತೈ ಪೀಸ್ ಉತ್ತಮ)

  • ಡೀಪ್ ಕಟ್‌ಗಳು ಹಾಕಿ (ಮಸಾಲೆ ಒಳಗೆ ಹೋಗಲು)


 ಮೊದಲ ಮೆರಿನೇಷನ್

  • 2 ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್

  • 1 ಟೀ ಸ್ಪೂನ್ ಉಪ್ಪು

  • 1 ದೊಡ್ಡ ನಿಂಬೆ ರಸ

  • 1 ಟೀ ಸ್ಪೂನ್ ಚಾಪ್ ಮಾಡಿದ ಬೆಳ್ಳುಳ್ಳಿ

ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಚಿಕನ್‌ಗೆ ಹಚ್ಚಿ. 30 ನಿಮಿಷ ಮುಚ್ಚಿ ಇಡಿ. ಈ ಸ್ಟೆಪ್ ಚಿಕನ್‌ನ ಸ್ಮೆಲ್ ಹೋಗಲು ಮತ್ತು ಒಳಗಿನಿಂದ ಸಾಫ್ಟ್ ಆಗಲು ಸಹಾಯ ಮಾಡುತ್ತದೆ.


 ಹೋಮ್‌ಮೇಡ್ ತಂದುರಿ ಮಸಾಲೆ ಪೌಡರ್

ರೆಡಿ‌ಮೇಡ್ ಬಳಸಿ ಮಾಡಬಹುದು. ಆದರೆ ಮನೆಯಲ್ಲೇ ಮಾಡಿದ್ರೆ ರುಚಿ ಡಬಲ್!

ಬೇಕಾಗುವ ಮಸಾಲೆಗಳು:

  • 6 ಟೀ ಸ್ಪೂನ್ ಧನಿಯಾ

  • 3 ಟೀ ಸ್ಪೂನ್ ಜೀರಿಗೆ

  • 2 ಟೀ ಸ್ಪೂನ್ ಸೋಂಪು

  • 4–5 ಲವಂಗ

  • 1 ಇಂಚು ದಾಲ್ಚಿನ್ನಿ ತುಂಡುಗಳು

  • 4–5 ಹಸಿರು ಏಲಕ್ಕಿ

  • 2 ದೊಡ್ಡ ಏಲಕ್ಕಿ

  • 2 ಚಕ್ರಫೂಲ್

  • 2–3 ಜಾವಿತ್ರಿ ತುಂಡು

  • 8 ಒಣ ಕೆಂಪು ಮೆಣಸು

  • 8–10 ಕಾಶ್ಮೀರಿ ಮೆಣಸು

  • 3 ಟೀ ಸ್ಪೂನ್ ಕಸೂರಿ ಮೆಂತ್ಯೆ

  • 2 ಚಿಟಿಕೆ ಅಜ್ವೈನ್

  • 2 ಟೀ ಸ್ಪೂನ್ ಸೊಂಟ ಪೌಡರ್

ಇವುಗಳನ್ನು ಸ್ವಲ್ಪ ಹೊತ್ತು ಹುರಿದು ತಣ್ಣಗಾದ ಮೇಲೆ ನುಣ್ಣಗೆ ಪುಡಿ ಮಾಡಿ. ಏರ್‌ಟೈಟ್ ಡಬ್ಬಿಯಲ್ಲಿ ಇಟ್ಟರೆ 1–2 ತಿಂಗಳು ಬಳಸಬಹುದು.


 ಎರಡನೇ ಮೆರಿನೇಷನ್

ಮೊದಲ ಮೆರಿನೇಷನ್ ನಂತರ ಚಿಕನ್‌ನಿಂದ ಬಂದ ನೀರನ್ನು ತೆಗೆಯಿರಿ.

ಇದಕ್ಕೆ ಸೇರಿಸಿ:

  • 6 ಟೀ ಸ್ಪೂನ್ ಹೋಮ್‌ಮೇಡ್ ತಂದುರಿ ಮಸಾಲೆ

  • 6 ಟೇಬಲ್ ಸ್ಪೂನ್ ಹಂಗ್ ಕರ್ಡ್

  • 3 ಟೀ ಸ್ಪೂನ್ ಹಸಿಮೆಣಸು ಪೇಸ್ಟ್

  • ½ ಟೀ ಸ್ಪೂನ್ ಅರಿಶಿಣ

  • 1 ಟೀ ಸ್ಪೂನ್ ಚಾಟ್ ಮಸಾಲೆ

  • 1 ಟೀ ಸ್ಪೂನ್ ಕಾಳಿ ಮೆಣಸು ಪುಡಿ

  • 1 ಟೀ ಸ್ಪೂನ್ ಕಾಶ್ಮೀರಿ ಮೆಣಸು ಪುಡಿ

  • 2 ಟೇಬಲ್ ಸ್ಪೂನ್ ಸಾಸಿವೆ ಎಣ್ಣೆ

  • 2–3 ಚಿಟಿಕೆ ಫುಡ್ ಕಲರ್ (ಐಚ್ಛಿಕ)

  • ½ ಟೀ ಸ್ಪೂನ್ ಕುಕಿಂಗ್ ಸೋಡಾ (ಸಾಫ್ಟ್‌ನೆಸ್‌ಗಾಗಿ)

ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಕನಿಷ್ಠ 2 ಗಂಟೆ ಮೆರಿನೇಟ್ ಮಾಡಿ. ಉತ್ತಮ ರುಚಿಗೆ ರಾತ್ರಿ ಪೂರ್ತಿ ಫ್ರಿಜ್‌ನಲ್ಲಿ ಇಡಿ.


 ಸ್ಮೋಕಿ ತಂದುರ್ ಎಫೆಕ್ಟ್ (ಧೂಮ್ ತಂತ್ರ)

ಒಂದು ಸಣ್ಣ ಬಟ್ಟಲಿನಲ್ಲಿ ಉರಿಯುತ್ತಿರುವ ಕೊಯ್ಲಾ ಇಡಿ. ಅದರ ಮೇಲೆ ತುಪ್ಪ ಹಾಕಿ ಚಿಕನ್ ಪಾತ್ರೆಯೊಳಗೆ ಇಟ್ಟು ಮುಚ್ಚಿ. 5 ನಿಮಿಷ ಬಿಡಿ. ಇದರಿಂದ ನಿಜವಾದ ತಂದುರ್ ಸುವಾಸನೆ ಬರುತ್ತದೆ.


 ಪ್ಯಾನ್‌ನಲ್ಲಿ ತಂದುರಿ ಚಿಕನ್ ಮಾಡುವ ವಿಧಾನ

  1. ದೊಡ್ಡ ಪ್ಯಾನ್ ತೆಗೆದು 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ.

  2. ಚಿಕನ್ ಪೀಸ್‌ಗಳನ್ನು ಹೈ ಫ್ಲೇಮ್‌ನಲ್ಲಿ 2–3 ನಿಮಿಷ ಶ್ಯಾಲೋ ಫ್ರೈ ಮಾಡಿ.

  3. ನಂತರ ತಿರುಗಿಸಿ ಮತ್ತೆ ಫ್ರೈ ಮಾಡಿ.

  4. ಈಗ ಫ್ಲೇಮ್ ಲೋ ಮಾಡಿ ಮುಚ್ಚಿ ಒಳಗೂ ಚೆನ್ನಾಗಿ ಬೇಯುವವರೆಗೆ ಕಾಯಿರಿ.

  5. ಮಧ್ಯೆ ಮಧ್ಯೆ ತಿರುಗಿಸುತ್ತಾ ಬೇಯಿಸಿ.

ಚಿಕನ್ ಸಂಪೂರ್ಣವಾಗಿ ಗಲಿದು ಹೊರಗೆ ಸ್ವಲ್ಪ ಚಾರ್ಡ್ ಎಫೆಕ್ಟ್ ಬಂದರೆ ರೆಡಿ!


ಸರ್ವಿಂಗ್ ಟಿಪ್ಸ್

  • ಮೇಲೆ ಸ್ವಲ್ಪ ಚಾಟ್ ಮಸಾಲೆ ಸ್ಪ್ರಿಂಕಲ್ ಮಾಡಿ

  • ಈರುಳ್ಳಿ ರಿಂಗ್ಸ್

  • ನಿಂಬೆ ತುಂಡು

  • ಹಸಿರು ಚಟ್ನಿ

ಇದರ ಜೊತೆ ಸರ್ವ್ ಮಾಡಿದರೆ ಮನೆಲ್ಲೇ ರೆಸ್ಟೋರೆಂಟ್ ಫೀಲ್ ಖಚಿತ!


 ಜ್ಯೂಸಿ ತಂದುರಿ ಚಿಕನ್ ಸೀಕ್ರೆಟ್ಸ್

* ಡೀಪ್ ಕಟ್ ಮಾಡುವುದು ಮಿಸ್ ಮಾಡಬೇಡಿ
* ಹಂಗ್ ಕರ್ಡ್ ಬಳಸಿ
* ಮಸ್ಟರ್ಡ್ ಆಯಿಲ್ ಫ್ಲೇವರ್‌ಗಾಗಿ ಮುಖ್ಯ
* ಕನಿಷ್ಠ 2 ಗಂಟೆ ಮೆರಿನೇಷನ್
 * ಕೊನೆಗೆ ಧೂಮ್ ಕೊಟ್ಟರೆ ರೆಸ್ಟೋರೆಂಟ್ ಸ್ಟೈಲ್ ಸ್ಮೆಲ್