ಇಂದು ನಾವು ತಯಾರಿಸೋಣ ಹೈದರಾಬಾದಿ ಸ್ಟೈಲ್ ಚಿಕನ್ ದಂ ಬಿರಿಯಾನಿ – ರಾಮ್ಜಾನ್ ಸ್ಪೆಷಲ್ ಪಕ್ಕಿ ಅಖ್ನಿ ಬಿರಿಯಾನಿ.
1. ಮೊದಲಿಗೇ ಮಸಾಲಾ ಪುಡಿ ತಯಾರಿಸೋಣ.
🌶️ ಬಿರಿಯಾನಿ ಮಾಡಲು ಮನೆಯಲ್ಲೀ ತಯಾರಿಸುವ ಗರಂ ಮಸಾಲಾ ಪುಡಿ ಅಥವ ರೆಡಿಮೇಡ್ ಗರಂ ಮಸಾಲಾವನ್ನು ಬಳಸಬಹುದು, ಆದರೆ ಮನೆಯಲ್ಲಿ ಮಾಡಿದ ಗರಂ ಮಸಾಲಾ ನಮ್ಮ ಅಡುಗೆಗೆ ಅದ್ಭುತ ರುಚಿಯನ್ನು ಕೊಡುತ್ತದೆ.
🧑🏻🍳🧑🏻🍳ಚಿಕನ್ ದಂ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು🧑🏻🍳🧑🏻🍳
* ಕೊತ್ತಂಬರಿ ಬೀಜ – 3 ಟೇಬಲ್ ಸ್ಪೂನ್
* ಸೋಂಪು – 1 ಟೀ ಸ್ಪೂನ್
* ಶಾಹಿ ಜೀರಿಗೆ – 1 ಟೀ ಸ್ಪೂನ್
(ಶಾಹಿ ಜೀರಿಗೆ ಬದಲಿಗೆ ಸಾಮಾನ್ಯ ಜೀರಿಗೆ ಬಳಸಬಹುದು)
* ಕಾಳು ಮೆಣಸು – 2 ಟೀ ಸ್ಪೂನ್
* ತೇಜಪತ್ತೆ(ಪಲಾವ್ ಎಲೆ) – 2
* ಚಕ್ರಫೂಲ್(ಮರಾಠಿ ಮೊಗ್ಗು) – 2
* ಹಸಿರು ಏಲಕ್ಕಿ – 12
* ಕಪ್ಪು ಏಲಕ್ಕಿ – 2
* ಲವಂಗ – 20
* ದಾಲ್ಚಿನ್ನಿ – 20 ಸಣ್ಣ ತುಂಡುಗಳು
* ಜಾಯಿಕಾಯಿ – 1 ಸಣ್ಣ ತುಂಡು
* ಜಾಪತ್ರೆ – ಅರ್ಧ ತುಂಡು
👉ಮೇಲೆ ಹೇಳಿರುವ ಎಲ್ಲ ಸಾಮಗ್ರಿಗಳನ್ನು ಚೆನ್ನಾಗಿ ಪುಡಿ ಮಾಡಿಕೊಂಡರೆ ಗರಂ ಮಸಾಲಾ ಪುಡಿ ರೆಡಿಯಾಗುತ್ತದೇ.
ಇದನ್ನು ಬಿರಿಯಾನಿ, ಪಲಾವ್, ಚಿಕನ್ ಅಥವಾ ಮಟನ್ ಅಡುಗೆಗಳಿಗೆ ಬಳಸಬಹುದು.
🍗 ಚಿಕನ್ ಮೆರಿನೇಷನ್ ಮಾಡಲು ಬೇಕಾಗುವ ಪದಾರ್ಥಗಳು
* ಚಿಕನ್ – 1 ಕೆಜಿ (ದೊಡ್ಡ ತುಂಡುಗಳು)
* ಸ್ಪೆಷಲ್ ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಟೇಬಲ್ ಸ್ಪೂನ್
* ಗರಂ ಮಸಾಲಾ ಪುಡಿ – 1 ಟೀ ಸ್ಪೂನ್
* ನಿಂಬೆ ರಸ – 1 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ – ½ ಟೀ ಸ್ಪೂನ್
* ಕೆಂಪು ಮೆಣಸಿನ ಪುಡಿ – 1½ ಟೀ ಸ್ಪೂನ್
* ಅರಿಶಿನ – ½ ಟೀ ಸ್ಪೂನ್
* ಮೊಸರು – 300 ಗ್ರಾಂ
* ಉಪ್ಪು – ರುಚಿಗೆ ತಕ್ಕಷ್ಟು
* ಹುರಿದ ಈರುಳ್ಳಿ – 2 ಮಧ್ಯಮ ಗಾತ್ರ
* ಪುದೀನ ಸೊಪ್ಪು – ಸ್ವಲ್ಪ
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಕುಟ್ಟಿದ ಹಸಿರು ಮೆಣಸಿನಕಾಯಿ – ಸ್ವಲ್ಪ
* ತುಪ್ಪ – 1 ಟೇಬಲ್ ಸ್ಪೂನ್
👉🏻 ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ👈🏻
👉🏻ಕನಿಷ್ಠ 1 ಗಂಟೆ ಮೆರಿನೇಟ್ ಮಾಡಿ👈🏻
ಈಗ ಬಾಸ್ಮತಿ ಅಕ್ಕಿ – 1 ಕೆಜಿ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ ನಂತರ ಅದನ್ನು1 ಗಂಟೆ ನೀರಿನಲ್ಲಿ ನೆನೆಸಿಡಿ.
🍲ಚಿಕನ್ ಬೇಯಿಸುವ ವಿಧಾನ🍲
* ಒಂದೂ ಕಾಡಾಯಿಯಲ್ಲಿ 5 ಟೇಬಲ್ ಸ್ಪೂನ್
ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಈಗ ಮೆರಿನೇಟ್ ಮಾಡಿದ ಚಿಕನ್ನ್ನು ಅದಕ್ಕೆ ಸೇರಿಸಿ ನಂತರ ಹೈ ಫ್ಲೇಮ್‌ನಲ್ಲಿ ಅದನ್ನು 10 ನಿಮಿಷ ಬೇಯಿಸಿ.
* ನಂತರ ಉರಿ ಕಡಿಮೆ ಮಾಡಿ ಪಾತ್ರೆಯನ್ನು ಮುಚ್ಚಿ 20 ರಿಂದ 25 ನಿಮಿಷ ಚೆನ್ನಾಗಿ ಬೇಯಿಸಿ.
( ಚಿಕನ್ 80% ಬೇಯುವವರೆಗೆ)
* ಗ್ರೇವಿ ಸ್ವಲ್ಪ ಒಣಗುವವರೆಗೆ ಚೆನ್ನಾಗಿ ಬೇಯಿಸಿ, ಚಿಕನ್ ಬೆಂದ
ಮೇಲೆ ಅದನ್ನು ಬದಿಗೆ ಇಡಿ🍲
🍚 ಅಕ್ಕಿಯನ್ನು ಬೇಯಿಸುವ ವಿಧಾನ🍚
* 3 ರಿಂದ 4 ಲೀಟರ್ ನೀರಿಗೆ ರುಚಿಗೆ ತಕ್ಕಷ್ಟು ಉಪ್ಪು, 1 ಟೇಬಲ್ ಸ್ಪೂನ್ ಎಣ್ಣೆ , ½ ಟೀ ಸ್ಪೂನ್ ಶಾಹಿ ಜೀರಿಗೆ , 4 ರಿಂದ 5 ದಾಲ್ಚಿನ್ನಿ , 3 ಹಸಿರು ಏಲಕ್ಕಿ , 4 ಲವಂಗವನ್ನು ಹಾಕಿ ಕುದಿಸಿ.
( ನೀರು ಹೆಚ್ಚು ಇದ್ದರೆ ಅಕ್ಕಿ ಚೆನ್ನಾಗಿ ಬೇಯುತ್ತದೆ.)
* ನೀರು ಕುದ್ಧ ಮೇಲೆ ನೆನೆಸಿದ ಅಕ್ಕಿಯನ್ನು ಅದಕ್ಕೆ ಹಾಕಿ. 70–80% ಬೇಯುವವರೆಗೆ ಬೇಯಿಸಿ. ನಂತರ ನೀರನ್ನು ಸೋಸಿ ತೆಗೆದುಕೊಳ್ಳಿ.
🍲 ಬಿರಿಯಾನಿ ಲೇಯರಿಂಗ್ ಮಾಡುವ ವಿಧಾನ🍲
1.ಪಾತ್ರೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ.
2. ಮೊದಲ ಲೇಯರ್ ಅನ್ನವನ್ನು ಹಾಕಿ.
3.ನಂತರ ಚಿಕನ್ ಗ್ರೇವಿಯನ್ನು ಸೇರಿಸಿ ಮತ್ತೆ ಅನ್ನವನ್ನು ಹಾಕಿ
🍛🍛ಗಾರ್ನಿಷ್ ಮಾಡುವ ವಿಧಾನ🍛🍛
ಪುದೀನ
ಕೊತ್ತಂಬರಿ ಸೊಪ್ಪು
ಕೇಸರಿ ಹಾಲು
ಸ್ವಲ್ಪ ಗರಂ ಮಸಾಲಾ
ಹುರಿದ ಈರುಳ್ಳಿ
ಮತ್ತೆ ಚಿಕನ್ ಲೇಯರ್
ಕೊನೆಯ ಲೇಯರ್ – ಅನ್ನ
ಗಾರ್ನಿಷ್ ಮಾಡಿ ಮುಚ್ಚಿ.
🔥 ದಂ ಪ್ರಕ್ರಿಯೆ
1.ಹಳೆಯ ತವವನ್ನು ಗ್ಯಾಸ್ ಮೇಲೆ ಇಡಿ
2.ಅದರ ಮೇಲೆ ಬಿರಿಯಾನಿ ಪಾತ್ರೆ ಇಡಿ
3.ಹೈ ಫ್ಲೇಮ್ನಲ್ಲಿ 5 ನಿಮಿಷ ಬೇಯಿಸಿ
4.ನಂತರ ಉರಿ ಕಡಿಮೆ ಮಾಡಿ 30 ನಿಮಿಷ ದಂನಲ್ಲಿ ಬೇಯಿಸಿದರೆ….
🍛 ಸವಿಯಾದ ಹೈದರಾಬಾದಿ ಚಿಕನ್ ದಂ ಬಿರಿಯಾನಿ ಸವಿಯಲು ಈಗ ಸಿದ್ದ🍛
🍗🍗15 ನಿಮಿಷ ವಿಶ್ರಾಂತಿ ಕೊಡಿ ನಂತರ ಸವಿಯಿರಿ🍗🍗