ಸಂಕ್ರಾಂತಿ ವಿಶೇಷ ಖಾರ ಪೊಂಗ

🌾 ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🌾

ಸ್ನೇಹಿತರೆ, ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಹೃದಯಪೂರ್ವಕ ಶುಭಾಶಯಗಳು 🙏
“ಎಳ್ಳು–ಬೆಲ್ಲ ತಿಂದು ಒಳ್ಳೆ ಮಾತಾಡು” ಅನ್ನೋ ಮಾತು ಏಕೆ ಬಂದಿದೆಯೆಂದರೆ –
ಹಬ್ಬಗಳು ನಮ್ಮ ಜೀವನದಲ್ಲಿ ಪಾಸಿಟಿವ್ ವೈಬ್ರೇಶನ್, ಹೊಸ ಆರಂಭ ಮತ್ತು ಒಳ್ಳೆಯ ಮನೋಭಾವ ತರಲು ಎಂದು.

ಚಳಿಗಾಲದಲ್ಲಿ ದೇಹಕ್ಕೆ ಉಷ್ಣ ನೀಡುವ ಪದಾರ್ಥಗಳು –
ಎಳ್ಳು, ಬೆಲ್ಲ, ತುಪ್ಪ, ಮೆಣಸು – ಇವೆಲ್ಲ ಸಂಕ್ರಾಂತಿಯ ಅಡುಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಪದಾರ್ಥಗಳು.

ಇಂದು ನಾವು ತಯಾರಿಸೋಣ

👉 ವೆನ್ ಪೊಂಗಲ್ / ಖಾರ ಪೊಂಗಲ್ (ಗೀ ಪೊಂಗಲ್)
👉 ಜೊತೆಗೆ ಪರ್ಫೆಕ್ಟ್ ಫಿಲ್ಟರ್ ಕಾಫಿ (ಮೆಜರ್‌ಮೆಂಟ್ ಸಹಿತ)

🍲 ವೆನ್ ಪೊಂಗಲ್ / ಖಾರ ಪೊಂಗಲ್ (Ghee Pongal)

📝 ಬೇಕಾಗುವ ಪದಾರ್ಥಗಳು :-

  • ಅಕ್ಕಿ – 1 ಕಪ್
  • ಹೆಸರುಬೇಳೆ – 1 ಕಪ್
  • ನೀರು – 5 ಕಪ್
  • ಬೆಣ್ಣೆ / ತುಪ್ಪ – ಅಗತ್ಯವಿರುವಷ್ಟು
  • ಉಪ್ಪು – ರುಚಿಗೆ ತಕ್ಕಷ್ಟು

🧑🏻‍🍳ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳು :-

  • ತುಪ್ಪ – 1 ಕಪ್
  • ಜೀರಿಗೆ – 1½ ಟೇಬಲ್ ಸ್ಪೂನ್
  • ಕಾಳು ಮೆಣಸು – 1 ಟೇಬಲ್ ಸ್ಪೂನ್
  • ಶುಂಠಿ – 1 ಇಂಚು
  • ಹಸಿಮೆಣಸಿನಕಾಯಿ – 1/2
  • ಗೋಡಂಬಿ – 10 ಗ್ರಾಂ
  • ಕರಿಬೇವು – ಸ್ವಲ್ಪ
  • ಒಣ ಕೊಬ್ಬರಿ ತುರಿ – ಸ್ವಲ್ಪ
  • ಇಂಗು – ಚಿಟಿಕೆ
  • ಅರಿಶಿನ – ಚಿಟಿಕೆ
  • ಹಾಲು – ಸ್ವಲ್ಪ

👩‍🍳 ತಯಾರಿಸುವ ವಿಧಾನ :-

  •  ಕುಕ್ಕರ್‌ನಲ್ಲಿ ಬೆಣ್ಣೆ/ತುಪ್ಪ ಹಾಕಿ ಅದನ್ನು ಕರಗಿಸಿ.
  •  ಹೆಸರುಬೇಳೆ ಸೇರಿಸಿ ಸುವಾಸನೆ ಬರುವವರೆಗೆ ಚೆನ್ನಾಗಿ ಹುರಿಯಿರಿ.
  •  ಸ್ವಚ್ಛವಾಗಿ ತೊಳೆದ ಅಕ್ಕಿ ಸೇರಿಸಿ ಒಂದು ನಿಮಿಷ ಕಲಸಿ.
  •  ಈಗ ಅದಕ್ಕೆ 5 ಕಪ್ ನೀರು ಮತ್ತು ಉಪ್ಪು ಸೇರಿಸಿ ಕುಕ್ಕರ್ ಮುಚ್ಚಿ.
  •  3 ವಿಶಲ್ ಬರುವವರೆಗೆ ಅದನ್ನು ಬೇಯಿಸಿ.

🧑🏻‍🍳ಒಗ್ಗರಣೆ ತಯಾರಿಸುವ ವಿಧಾನ

  •  ಬಾಂಡ್ಲಿಯಲ್ಲಿ ತುಪ್ಪ ಬಿಸಿ ಮಾಡಿ.
  • ಜೀರಿಗೆ, ಕಾಳು ಮೆಣಸು, ಶುಂಠಿ, ಗೋಡಂಬಿ, ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಚಟಪಟ ಎನ್ನುವವರೆಗೂ ಹುರಿಯಿರಿ.
  •  ಇಂಗು ಮತ್ತು ಕೊಬ್ಬರಿ ತುರಿಯನ್ನು ಅದಕ್ಕೆ ಸೇರಿಸಿ.
  •  ಈಗ ಒಗ್ಗರಣೆಯನ್ನು ಬೇಯಿಸಿದ ಪೊಂಗಲ್‌ಗೆ ಸೇರಿಸಿ ಮಿಕ್ಸ್ ಮಾಡಿ.
  •  ಸ್ವಲ್ಪ ಹಾಲು ಹಾಕಿ 1–2 ಕುದಿ ಬರಿಸಿದರೆ ಪೊಂಗಲ್ ಸಾಫ್ಟ್ ಮತ್ತು ರಿಚ್ ಆಗುತ್ತದೆ.
    👉🏻 ಮದುವೆ ಮನೆ ಸ್ಟೈಲ್ ಗೀ ಪೊಂಗಲ್ ರೆಡಿ👈🏻

💐 ಹಬ್ಬದ ಸಂದೇಶ💐
ಸಂಕ್ರಾಂತಿ ಅನ್ನೋದು

👉 ಸಂತೋಷವನ್ನು ಹಂಚಿಕೊಳ್ಳುವ ಹಬ್ಬ
👉 ಎಲ್ಲಾರಿಗೂ ಒಳ್ಳೆಯದನ್ನು ಬಯಸುವ ಹಬ್ಬ
👉 ಸಂಬಂಧಗಳನ್ನು ಬೆಸೆಯುವ ಹಬ್ಬ

ಎಳ್ಳು–ಬೆಲ್ಲ ಹಂಚಿ,
ಒಳ್ಳೆ ಮಾತಾಡಿ,
ಎಲ್ಲರಿಗೂ ಒಳ್ಳೆಯದಾಗಲಿ ಅಂತ ಹಾರೈಸಿ.

ಸರ್ವೇಜನ ಸುಖಿನೋ ಭವಂತು 🙏
ಎಲ್ಲರಿಗೂ ಆರೋಗ್ಯ, ಆಯಸ್ಸು, ಐಶ್ವರ್ಯ ದೊರೆಯಲಿ.